ಕುಮಾರಸ್ವಾಮಿಯವರಿಗೆ ಅಧಿಕಾರವಿದ್ದಾಗ ನೆನಪಾಗದ ಮಧುಬಂಗಾಪ್ಪ ಈಗ ಟೀಕಿಸುವುದ್ಯಾಕಪ್ಪ.

ಜೆಡಿಎಸ್ ಪಕ್ಷ ಕೇವಲ ಒಂದು ಕುಟುಂಬದ ಆಸ್ತಿಯಂತಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯಾದರೆ ಅವರಣ್ಣ ಅವರ ಸಂಪುಟದ ಪ್ರಬಲ ಖಾತೆಯ ಸಚಿವ ಅವರ ಪತ್ನಿ ಶಾಸಕಿ ಅವರ ಅಣ್ಣನ ಮಗ ಲೋಕಸಭಾ ಸದಸ್ಯ ದುರಾದೃಷ್ಟ ಅವರ ಮಗ ಮತ್ತವರ ತಂದೆ ಗೆಲ್ಲಲಿಲ್ಲ ಆದರೂ ಅವರ ತಂದೆ ಜೆಡಿಎಸ್ ನ ಶಾಶ್ವತ ರಾಷ್ಟ್ರೀಯ ಅದ್ಯಕ್ಷರು. ಹೀಗೆ ಕುಟುಂಬದ ಎಲ್ಲಾ ಸದಸ್ಯರಿಗೆ ರಾಜ್ಯಸರ್ಕಾರದ ಮತ್ತು ಪಕ್ಷದ ಪ್ರಮುಖ ಹುದ್ದೆಗಳನ್ನು ದಾರೆಯರೆದುಳಿದರೆ ಉಳಿದ ಅಲ್ಪಸ್ವಲ್ಪ ಜಾಗವನ್ನು ತಮ್ಮ ಸಂಬಂಧಿಕರಿಗೆ ಇನ್ನು ಸ್ವಲ್ಪ ಜಾಗವನ್ನು ಅಷ್ಟೇನು ಪ್ರಬಾವಿಯಲ್ಲದ ವ್ಯಕ್ತಿಗಳಿಗೆ ನೀಡಿ ಕೈ ತೊಳೆದುಕೊಂಡುಬಿಡುತ್ತಾರೆ ಕುಮಾರಸ್ವಾಮಿ.ಯಾರು ಪಕ್ಷದ ಎರಡನೇ ಪ್ರಬಾವಿ ವ್ಯಕ್ತಿಯಾಗಿ ಬೆಳೆಯತೊಡುಗುತ್ತಾರೊ ಅಂತವರಿಗೆ ತಿಪ್ಪರಲಾಗ ಹಾಕಿದರು ಬೆಳೆಯಲು ಬಿಡುವುದಿಲ್ಲ ಜೆಡಿಎಸ್ ಪ್ರಬಾವಿಗಳು.ಹೀಗಾಗಿ ಜೆಡಿಎಸ್ ಪಕ್ಷವನ್ನು ಯಾರೇ ಸೇರಿದರು ಕೆಲವು ವರ್ಷಗಳ ಬಳಿಕ ಆ ಪಕ್ಷವನ್ನು ತ್ಯಜಿಸುವುದು ಶತಸಿದ್ದ. ಸದ್ಯ ಮಧುಬಂಗಾರಪ್ಪನವರು ಸಹ ಇದೇ ದಾರಿ ಹಿಡಿದಿದ್ದಾರೆ ಮಧುಬಂಗಾರಪ್ಪನವರು ಕಾಂಗ್ರೆಸ್ ಸೇರುವುದು ಖಚಿತವಾಗಿದ್ದು ಜೆಡಿಎಸ್ ನಿಂದ ಬಹುದೂರ ಸಾಗಿದ್ದಾರೆ.ಹಾಗೆ ನೋಡಿದರೆ ಸಿದ್ರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಧುಬಂಗಾರಪ್ಪನವರು ಸೊರಬ ತಾಲೂಕಿಗೆ ಹಿಂದೆಂದಿಗಿಂತಲೂ ಅತಿ ಹೆಚ್ಚು ಅನುದಾನ ತಂದು ತಾಲೂಕನ್ನು ಅಭಿವೃದ್ಧಿ ಪಡಿಸಿದ್ದರು.ತಾಲೂಕಿನಾದ್ಯಂತ ಬಡವರಿಗೆ ಅನೇಕ ವರ್ಷಗಳಿಂದ ಸಾಗುವಳಿ ಮಾಡಿಕೊಂಡಿದ್ದ ಬಗರುಕುಮ್ ಭೂಮಿಯ ಹಕ್ಕುಪತ್ರಗಳನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಜೆಡಿಎಸ್ ಶಾಸಕರಾಗಿ ಕಾಂಗ್ರೆಸ್ ಸರ್ಕಾರದಲ್ಲಿ ತಮ್ಮ ಪ್ರಭಾವ ಬಳಸಿ ತಾಲೂಕಿನ ಕೆಲಸ ಕಾರ್ಯಗಳನ್ನು ಮಾಡಿಸಿದ್ದರು. ಆದರೆ ತಮ್ಮದೇ ಪಕ್ಷ ಅಧಿಕಾರಕ್ಕೇರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದರೂ ಮಧುಬಂಗಾರಪ್ಪನವರು ಸೋತ ಕಾರಣ ಅಧಿಕಾರದಿಂದ ದೂರ ಉಳಿಯಬೇಕಾಯಿತು. ರಾಜ್ಯದ ಅನೇಕ ಪ್ರಭಾವಿ ರಾಜಕಾರಣಿಗಳಲ್ಲಿ ಒಬ್ಬರಾದ ಮಧುಬಂಗಾರಪ್ಪನವರಿಗೆ ಕುಮಾರಸ್ವಾಮಿಯವರು ಸಚಿವಸ್ಥಾನ ನೀಡುತ್ತಾರೆಂದೇ ಬಾವಿಸಲಾಗಿತ್ತು ಕುಮಾರಸ್ವಾಮಿಯವರಿಗೆ ಅವರಣ್ಣ ರೇವಣ್ಣನವರಿಗೆ ಸಚಿವಸ್ಥಾನ ಕೊಡುವುದು ನೆನಪಾಯಿತು ಆದರೆ ಮಧು ನೆನಪಾಗಲಿಲ್ಲ.

ಬಂಗಾರಪ್ಪನವರ ಎಲ್ಲಾ ಗುಣಗಳನ್ನು ಹೊಂದಿದ್ದಾರೆ ಮಧುಬಂಗಾರಪ್ಪ

ತಾಲೂಕಿನ ಪ್ರತಿ ಗ್ರಾಮದ ಪ್ರತಿ ಕಾರ್ಯಕರ್ತರನ್ನು ಅವರವರ ಹೆಸರಿನಿಂದ ಗುರುತಿಸುತಿದ್ದರು ಬಂಗಾರಪ್ಪ. ಅವರ ಮನೆಗೆ ಯಾರೇ ತಮ್ಮ ಕಷ್ಟಗಳನ್ನು ಹೇಳಿಕೊಂಡು ಹೋದರೂ ಅವರ್ಯಾರನ್ನು ಬಂಗಾರಪ್ಪನವರು ಬರೀಗೈಲಿ ಕಳಿಸಿದ ಉದಾಹರಣೆಯಿಲ್ಲ.ತಮ್ಮ ಮನೆಗೆ ಬಂದವರು ಯಾರೇ ಆಗಿರಲಿ ಅವರಿಗೆ ನಾಷ್ಟ ಚಹಾ ನೀಡಿ ಹಣದ ಸಹಾಯ ಮಾಡುತಿದ್ದರು ಬಂಗಾರಪ್ಪ. ಅದೆಷ್ಟೋ ಜನ ಬೆಂಗಳೂರಿಗೆ ಯಾವುದೋ ಕಾರ್ಯನಿಮಿತ್ತ ತೆರಳಿದರೆ ಅಂತಿಮವಾಗಿ ಬೆಂಗಳೂರಿನಿಂದ ತಮ್ಮ ಊರುಗಳಿಗೆ ವಾಪಸಾಗುವಾಗ ಬಂಗಾರಪ್ಪನವರನ್ನು ಬೇಟಿ ಮಾಡಿ ಬರುವುದು ಅಬ್ಯಾಸವಾಗಿಬಿಟ್ಟಿತ್ತು ಹಾಗೆ ಭೇಟಿ ನೀಡಿದವರೆಲ್ಲರಿಗು ಎರಡೂ ಕಡೆಯ ಬಸ್ ಟಿಕೇಟಿನ ಹಣವನ್ನು ಅವರ ಕಿಸೆಯಲ್ಲಿಟ್ಟು ಕಳಿಸುತಿದ್ದರು ಬಂಗಾರಪ್ಪ. ಹೇಳುತ್ತಾ ಹೋದರೆ ಬಂಗಾರಪ್ಪನವರ ವಿಚಾರಗಳಿಗೆ ಅಂತಿಮವೇ ಇಲ್ಲ.ಹೆಚ್ಚು ಕಡಿಮೆ ಇವೆಲ್ಲಾ ಗುಣಗಳು ಮಧುಬಂಗಾರಪ್ಪನವರನ್ನು ಆಳುತ್ತಿವೆ.ಇವರ ತಂದೆಯವರನ್ನು ಮುಖ್ಯಮಂತ್ರಿ ಮಾಡಿದ ಕಾಂಗ್ರೆಸ್ ಪಕ್ಷವನ್ನು ಸೇರಿ ಶಿವಮೊಗ್ಗದಲ್ಲಿ ಸ್ವಲ್ಪ ಮಂಕಾಗಿರುವ ಪಕ್ಷದ ನೆಲಗಟ್ಟನ್ನು ಸುಭದ್ರಗೊಳಿಸಿ ತಮ್ಮ ರಾಜಕೀಯ ಪ್ರಭಾವವನ್ನು ರಾಜ್ಯದ ಉದ್ದಗಲಕ್ಕು ಇನ್ನಷ್ಟು ಹೆಚ್ಚಿಸಿಕೊಳ್ಳಲಿ.

ಬಂಗಾರಪ್ಪನವರು ತಮ್ಮ ಆಡಳಿತಾವಧಿಯಲ್ಲಿ ತಂದ ಯೋಜನೆಗಳು ಪ್ರತಿ ಬಡವರ ಮನೆಗಳನ್ನು ತಲುಪುತಿದ್ದವು ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್ ಹಳ್ಳಿಯ ಬಡ ವಿದ್ಯಾರ್ಥಿಗಳಿಗಾಗಿ ಗ್ರಾಮೀಣಕೃಪಾಂಕ ಬಡವರಿಗಾಗಿ ಮನೆ

ಈಗಿನವರು ಆಡಳಿತದಲ್ಲಿ ಅವಶ್ಯಕತೆಯಿಲ್ಲದ ಜಾಗದಲ್ಲಿ ಸರ್ಕಾರೀ ಬಸ್ಟ್ಯಾಂಡ್ ಅನಾವಶ್ಯಕ ಖರ್ಚಿನ ಖಾಸಗಿ ಬಸ್ಟ್ಯಾಂಡ್ ಆರು ತಿಂಗಳಿಗೊ ವರ್ಷಕ್ಕೊಮ್ಮೆ ನಡೆಯುವ ಕಾರ್ಯಕ್ರಮಗಳಿಗಾಗಿ ಅನಾವಶ್ಯಕ ಆಡಿಟೋರಿಯಮ್ ಅಬ್ಬಬ್ಬಾ ಇವೆಲ್ಲಾ ಬಡವರ ಹೊಟ್ಟೆ ತುಂಬಿಸೋಕೆ ಸಾಧ್ಯವೇ?

Published by ರಾಜಕೀಯ ವಿಶ್ಲೇಷಣೆ

ಚನ್ನಬಸಪ್ಪ ಸೊರಬ ಶಿವಮೊಗ್ಗ (ಜಿ)

One thought on “ಕುಮಾರಸ್ವಾಮಿಯವರಿಗೆ ಅಧಿಕಾರವಿದ್ದಾಗ ನೆನಪಾಗದ ಮಧುಬಂಗಾಪ್ಪ ಈಗ ಟೀಕಿಸುವುದ್ಯಾಕಪ್ಪ.

Leave a comment

Design a site like this with WordPress.com
Get started